"ಸ್ವೀಕರಿಸುವ ಮನಸ್ಸಿದ್ದರೆ ಸದ್ಗುಣಗಳನ್ನು ಸ್ವೀಕರಿಸು
ಈಜುವ ಮನಸ್ಸಿದ್ದರೆ ಜ್ಞಾನ ಸಾಗರದಲ್ಲಿ ಈಜು
ನಡೆಯುವ ಮನಸ್ಸಿದರೆ ಸನ್ಮಾರ್ಗದಲ್ಲಿ ನಡೆ
ಮಾತನಾಡುವುದಿದ್ದರೆ ಸತ್ಯವನ್ನೇ ಮಾತನಾಡು
ಆಡುವುದಿದ್ದರೆ ಅನುಭವದ ಮಾತುಗಳನ್ನೇ ಆಡು
ಕೇಳುವುದಿದ್ದರೆ ಸದುಪುದೇಶಗಳನ್ನೇ ಕೇಳು
ದೊರಕಿಸುವುದಿದ್ದರೆ ಜಯವನ್ನೇ ದೊರಕಿಸು"